ಕರಿಸಿರಿಯಾನ (ಕಾದಂಬರಿ)

ಕರಿಸಿರಿಯಾನ (ಕಾದಂಬರಿ)

Book No - 1

ಕರಿಸಿರಿಯಾನ (ಕಾದಂಬರಿ)

ಪ್ರಪಂಚದ ಇತಿಹಾಸದಲ್ಲಿಯೇ ಅತ್ಯಂತ ಸಿರಿವಂತ  ಸಾಮ್ರಾಜ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ವಿಜಯ ನಗರದ ರಾಜದಾನಿ ಹಂಪಿಯನ್ನು  ರೋಮ ನಂತರದ ಅತ್ಯಂತ ಸಿರಿವಂತ ನಗರ ಎಂದು ಚರಿತ್ರಕಾರರು ಬಣ್ಣಿಸಿದ್ದಾರೆ.  ಈ ಸಿರಿವಂತ ಸಾಮ್ರಾಜ್ಯದ ಅರಸರ ನಿಧಿಯು  ತಾಳಿಕೋಟೆಯ ಯುದ್ದದ ನಂತರ ಬಹುಮನಿ ಸುಲ್ತಾನರ ಕೈವಶವಾಯಿತು ಎಂದು ನಂಬಲಾಗಿತ್ತು. ಆದರೆ ಚರಿತ್ರೆಯ ಕೆಲವು ಆಕರಗಳ ಪ್ರಕಾರ ಸುಲ್ತಾನರು ಹಂಪಿಯನ್ನು ತಲುಪುವಷ್ಟರಲ್ಲಿಯೇ ಆ ಇಡೀ ನಿಧಿಯನ್ನು ರಾಜವಂಶದವರು ರಹಸ್ಯವಾಗಿ ಸುರಕ್ಷಿತ ತಾಣಕ್ಕೆ ಹೊತ್ತೊಯ್ದ್ ಸಂರಕ್ಶಿಸುತ್ತಾರೆ. ಈ ಘಟನೆಗಳ ನಂತರ ವಿಜಯನಗರದ ವಂಶವು ಎಂದೂ ಅದ್ದೂರಿಯಾಗಿ ತಲೆ ಎತ್ತಲಿಲ್ಲ. ಹಾಗಾದರೆ ಅವರು ಸಂರಕ್ಷಿಸಿದ  ನಿಧಿಯು ಇನ್ನೂ ರಹಸ್ಯ ತಾಣದಲ್ಲಿ ಅಡಗಿದೆಯೆ? ಈ ರಹಸ್ಯವನ್ನು ಹುಡುಕಿ ಹೊರಟ ಇಬ್ಬರು ಸಂಶೋಧಕಿಯರ ಯಾತ್ರೆಯೆ ಕರಿಸಿರಿಯಾನ.

Read More
- ಕನಕ ಮುಸುಕು (ಕಾದಂಬರಿ)

ಕನಕ ಮುಸುಕು (ಕಾದಂಬರಿ)

Book No - 497

ಕನಕ ಮುಸುಕು (ಕಾದಂಬರಿ)

ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಚಂದ್ರಗುಪ್ತನು ತನ್ನ ಇಳಿವಯಸಿನಲ್ಲಿ ಜೈನ ಧರ್ಮವನ್ನು ಸ್ವೀಕರಿಸಿ,  ಸಾವಿರಾರು ಜೈನ ಮುನಿಗಳ ಜೊತೆ ದಕ್ಷಿಣಕ್ಕೆ ಪ್ರಯಾಣ ಬೆಳೆಸುತ್ತಾನೆ- ತಾನು ಅಪ್ಪಿಕೊಂಡ ಜೈನ ಧರ್ಮದ  ಪ್ರಚಾರಕ್ಕೆಂದು. ಆದರೆ ಈ ಪಯಣ ಕೇವಲ ತುಂಡು ಬಟ್ಟೆ ತೊಟ್ಟು ಬಿಕ್ಷೆ ಬೇಡಿ ಜೀವನ ಸಾಗಿಸುವ  ಸನ್ಯಾಸಿಗಳ ಯಾತ್ರೆಯಾಗಿರಲಿಲ್ಲ. ಜೈನ ಧರ್ಮವನ್ನು ದಕ್ಷಿಣದಲ್ಲಿ ನೆಲೆಗೊಳಿಸಲು ಹಾಗೂ ಆ ಸಾವಿರಾರು ಜೈನ ಮುನಿಗಳನ್ನು ಪ್ರಚಾರದಲ್ಲಿ ತೊಡಗಿಸಲು  ಬೇಕಾಗಿದ್ದ ಅಘಾದ ಸಂಪತ್ತನ್ನು ಚಕ್ರವರ್ತಿ ತನ್ನೊಂದಿಗೆ ಒಯ್ಯುತ್ತಾನೆ. ಸಾವಿರಾರು ಗಾವುದಗಳ ದೂರ, ಅಪರಿಚಿತ ಪ್ರದೇಶಗಳ ಮೂಲಕ  ಹಾದುಹೋಗುವ ಈ ಪ್ರಯಾಣದಲ್ಲಿ ತಾವು ಹೊತ್ತು ಹೋಗುತ್ತಿರುವ      ಸಂಪತ್ತಿಗೆ ಯಾವುದೇ ಕುಂದು ಬರದಂತೆ ಕಾಪಾಡಿಕೊಳ್ಳಲು, ಇಡೀ ಕಾರ್ಯಾಚರಣೆಯನ್ನು ಒಂದು ರಹಸ್ಯ ಯೋಜನೆಯಾಗಿ ರೂಪಿಸಲಾಗುತ್ತದೆ. ಕೊನೆಗೆ,  ಶ್ರವಣಬೆಳಗೊಳದತ್ತ ಬಂದ ಈ ಸಂಪತ್ತು ಅಲ್ಲಿಯೂ ಕೂಡ ಹಲವು ರಹಸ್ಯ ಸೂತ್ರಗಳ ಕಕ್ಷೆಯೊಳಗೆ ರಕ್ಷಿಸಲ್ಪಡುತ್ತದೆ.

ಆ ರಹಸ್ಯ ರಕ್ಷಣಾ ಸೂತ್ರಗಳನ್ನು ಹೆಣೆದವರಾರು? ಆ ನಿಧಿ ಶ್ರವಣ ಬೆಳಗೊಳದಿಂದ ಎಲ್ಲಿ ಹೋಯಿತು? ಈ ವಿವರಗಳನ್ನು ಹುಡುಕಿಹೊರಟ ಒಬ್ಬ ಚರಿತ್ರೆಯ ವಿಧ್ಯಾರ್ಥಿನಿ ತನ್ನ ಹುಡುಕಾಟವನ್ನು ಎಡಿನ್ ಬರೋಗೆ ಕೊಂಡೊಯ್ಯುತ್ತಾಳೆ. ದುರದ್ಟುಷ್ಟವಶಾತ್, ಅಲ್ಲಿ ಅವಳು ಕಂಡುಕೊಂಡ ಸತ್ಯಗಳೇ ಅವಳಿಗೆ ಕಂಟಕಗಳಾಗುತ್ತವೆ. ಆಕೆಯ ಪ್ರಯತ್ನ ಫಲಿಸಿತೆ ಎನ್ನುವುದು ಕನಕ ಮುಸುಕು ತೆರೆದಾಗ ತಿಳಿಯುತ್ತದೆ.

Read More
Book No - 286

ಕಪಿಲಿಪಿಸಾರ (ಕಾದಂಬರಿ)

ಕಪಿಲಿಪಿಸಾರ (ಕಾದಂಬರಿ)

ಕಪಿಲಿಪಿಸಾರ (ಕಾದಂಬರಿ)

ರಾಮಾಯಣದಲ್ಲಿ ಲಕ್ಷ್ಮಣನನ್ನು ‘ಸಾವಿನ ಸ್ಥಿತಿಯಿಂದ’ ಹೊರಗೆ ತಂದ ‘ಸಂಜೀವನಿ’ ಗೆ ಅಂಥಹ ಅಪಾರ ಶಕ್ತಿ ಇದ್ದರೆ ಅದರಿಂದ ಮಾನವನ ಮುದಿತನವನ್ನೆ ‘U’ turn ಗೊಳಿಸಬಹುದು ಎಂದು ನಂಬಿ, ಕೆಲವು ಪಾಶ್ಚಾತ್ಯ ಸಂಶೋಧಕರು ಆ ಸಸ್ಯವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅವರಿಗೆ ಬೆನ್ನೆಲುಬಾಗಿ ನಿಂತ ಕೆಲವು ಕಾರ್ಪೊರೇಟ್  ಸಂಸ್ಥೆಗಳು ಭಾರತದ ಕೆಲವು ಅಮಾಯಕ ವಿಜ್ಞಾನಿಗಳನ್ನು ತಮ್ಮ ಷಡ್ಯಂತ್ರಕ್ಕೆ ಸಿಲುಕಿಸಿ ಆ ಸಸ್ಯದ ಹುಡುಕಾಟದಲ್ಲಿ ತೊಡಗಿಸುತ್ತಾರೆ- ಆ ಸಸ್ಯವನ್ನು ಭಾರತದಿಂದ ಕದ್ದೊಯ್ದು ವ್ಯಾಪಾರಿಕರಣಗೊಳಿಸಲು. ‘ಕಪಿಲಿಪಿಸಾರ’ ಸಂಜೀವನಿಯ ಬಗ್ಗೆ, ಆಗಿನ ಕಾಲದ ‘ವಾನರ’ ಕುಲದ ಬಗ್ಗೆ ಹಾಗೂ ಆ ಸಸ್ಯದ ಹುಡುಕಾಟದಲ್ಲಿ ನಡೆದ ರಹಸ್ಯ ಯೋಜನೆಗಳ ಬಗೆಗಿನ ಕಥಾನಕ.

Read More
ತಿರುಪತಿಗೆ ಕೇವಲ ೩೦ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ? ● ಮೆಹರ್ ಗಂಜ್ ನ ‘ಬಲ್ಗಾಡಿಯ ಅರಮನೆ’ಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ? ● ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್ ಗೆ ಮುಸ್ಲಿಮ್ ರಾಜಕುಮಾರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ ಎನ್ನಲಾದ ಮುಸೋಲಿಯಮ್ ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೆ? ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು? ● ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾಧ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ದದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ? ಇಂಥಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹ ‘ಗುಡಿ ಮಲ್ಲಮ್’.

ಗುಡಿಮಲ್ಲಮ್ (ಕಥಾ ಸಂಕಲನ)

ತಿರುಪತಿಗೆ ಕೇವಲ ೩೦ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ? ● ಮೆಹರ್ ಗಂಜ್ ನ ‘ಬಲ್ಗಾಡಿಯ ಅರಮನೆ’ಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ? ● ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್ ಗೆ ಮುಸ್ಲಿಮ್ ರಾಜಕುಮಾರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ ಎನ್ನಲಾದ ಮುಸೋಲಿಯಮ್ ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೆ? ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು? ● ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾಧ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ದದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ? ಇಂಥಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹ ‘ಗುಡಿ ಮಲ್ಲಮ್’.

 ಗುಡಿಮಲ್ಲಮ್ (ಕಥಾ ಸಂಕಲನ)
  • ತಿರುಪತಿಗೆ ಕೇವಲ ೩೦ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ?
  • ಮೆಹರ್ ಗಂಜ್ ನ ‘ಬಲ್ಗಾಡಿಯ ಅರಮನೆ’ಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ?
  • ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್ ಗೆ ಮುಸ್ಲಿಮ್ ರಾಜಕುಮಾರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ  ಎನ್ನಲಾದ ಮುಸೋಲಿಯಮ್ ನ ಮೂರು ಸಮಾಧಿಗಳಲ್ಲಿ ಒಂದು  ಹಿಂದೂ ರಾಜನದ್ದೆ?  ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು?
  • ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾಧ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ದದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ?

ಇಂಥಹ ಕುತೂಹಲಕರ ಚಾರಿತ್ರಿಕ  ವಿಷಯಗಳ ಸುತ್ತ ಡಾ ಗಣೇಶಯ್ಯ ಹೆಣೆದ   ಕತೆಗಳ ಸಂಗ್ರಹ ‘ಗುಡಿ ಮಲ್ಲಮ್’.

Read More
ಪದ್ಮ ಪಾಣಿ (ಕಥಾ ಸಂಕಲನ)

ಪದ್ಮ ಪಾಣಿ (ಕಥಾ ಸಂಕಲನ)

ಪದ್ಮ ಪಾಣಿ (ಕಥಾ ಸಂಕಲನ)

ಪದ್ಮ ಪಾಣಿ (ಕಥಾ ಸಂಕಲನ)
  • ಅಜಂತದ ಗುಹೆಗಳಲ್ಲಿರುವ ಪ್ರಪಂಚ ಪಸಿದ್ದವಾದ ಪದ್ಮಪಾಣಿಯ ಚಿತ್ರವು ಬೋದಿಸತ್ವನ ಪ್ರತಿರೂಪವಾದರೆ ಅದರಲ್ಲೇಕೆ ಹೆಣ್ಣಿನ ಸೌಂದರ್ಯ ತುಂಬಿಕೊಂಡಿದೆ?
  • ಕೋಲಾರದ ಬಳಿಯ ಒಂದು ಹಳ್ಳಿಯ ವಂಶದ ಕುಡಿಯನ್ನು ಉಳಿಸುವ ಸಲುವಾಗಿ ಅಲ್ಲಿನ ಮೂಲದೇವತೆ ನಿಜಕ್ಕೂ ಬೆಂಕಿ ಇಲ್ಲದೆ ಹಾಲನ್ನು ಉಕ್ಕಿಸಿದಳೆ?
  • ಒಂದು ಕಾಲದಲ್ಲಿ ಹೊಯ್ಸಳರ ಅರ್ಥಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದ ತಲಕಾಡು ನಗರ ಅಲಮೇಲಮ್ಮನ ಶಾಪದಿಂದಾಗಿಯೆ ಮರಳಿನಿಂದ ತುಂಬಿಕೊಂಡಿತೆ? ಮೈಸೂರು ಅರಸರನ್ನೂ ಅಕೆಯ ಶಾಪ ತಟ್ಟಿದ್ದು ಎಷ್ಟು ಸತ್ಯ?
  • ಕಿತ್ತೂರು ವಂಶದ ಪಟ್ಟಿಯಲ್ಲಿ  ಮುಸ್ಲಿಂ ರಾಜ ಬರಲು ಹೇಗೆ ಸಾಧ್ಯ?
  • ಬೇಲೂರು ದೇವಾಲಯದ ಶಿಲಾಬಾಲಿಕೆಯರಿಗೆ ಶಾಂತಲೆ ಮಾದರಿಯಾಗಿದ್ದಳೆ ಎಂಬ ಪ್ರಶ್ನೆಯ  ಬಗ್ಗೆ ಪಿಹೆಚ್ ಡಿ ಮಾಡುತ್ತಿದ್ದ  ಮಾಧವಿ ಕಂಡುಕೊಂಡ ಸತ್ಯ ಏನು?
  • ಸಸ್ಯಗಳಲ್ಲೂ ತಾಯಿ ಮಕ್ಕಳ ಕಲಹ ಇದೆ ಎಂದು ಪುರಾವೆ ಸಹಿತ ತೋರಿಸಿದ ಪ್ರೊಫ಼ೆಸರ್ ಅವರನ್ನು ಅದೇ ಬಗೆಯ ಸಮಸ್ಯೆ ತಮ್ಮ ಸಂಸಾರದಲ್ಲೂ ಕಾಡಲು ಕಾರಣ?
  • ಬಂಗಾಳ ಸಮುದ್ರದಲ್ಲಿ ಭಾರತದ ನೌಕಾಪಡೆಯ ಜೊತೆ ಮಿಲಿಟರಿ ಕಸರತ್ತು ಮಾಡುತ್ತಿದ್ದ ಅಮೆರಿಕದ ಯುದ್ದ ನೌಕೆಗಳ ತಂಡ ಒಂದು ರಹಸ್ಯ ಕಾರ್ಯಾಚರಣೆಯಲ್ಲಿ ನಿರತವಾಗಿತ್ತೆ?
  • ಬೌದ್ದ ಧರ್ಮದ ಬಿಕ್ಕುಗಳ ಜೀವನ ನಿಯಮಗಳನ್ನು ರೂಪಿಸುವಲ್ಲಿ ಬುದ್ದನ ಜೀವನವನ್ನೇ ಮಾದರಿಯಾಗಿಸಿಕೊಂಡದ್ದು ಎಷ್ಟು ಸರಿ? ಬೌದ್ದ ಮುನಿಗಳು ಸಂಸಾರ ಜೀವನವನ್ನು ಅಳವಡಿಸಿಕೊಳ್ಳುವುದು ಬುದ್ದನ ಬೋಧನೆಗೆ ತಾತ್ವಿಕವಾಗಿ ವಿರೋಧವಾಗುತ್ತದೆಯೆ? ಇಂಥಹ ಪ್ರಶ್ನೆಗಳನ್ನು ಬೌದ್ದ ಮುನಿಯೊಬ್ಬನ ಮನಸ್ಸಿನಲ್ಲಿ ನೆಟ್ಟ ಹೆಣ್ಣೊಬ್ಬಳು ಸಾಮ್ರಾಟ ಅಶೋಕನನ್ನೆ ಪೇಚಿಗೆ ಸಿಲುಕಿಸಿ ಬೌದ್ದ ಧರ್ಮದ ತಾತ್ವಿಕತೆಯನ್ನೆ ಪ್ರಶ್ನಿಸಿದ್ದಳು.

ಈ ವಿವರಗಳನ್ನು ಕೊಡುವ ಕಥೆಗಳ ಸಂಕಲನ ಇದು.

Read More
ಶಾಲಭಂಜಿಕೆ (ಕಥಾ ಸಂಕಲನ)

ಶಾಲಭಂಜಿಕೆ (ಕಥಾ ಸಂಕಲನ)

ಶಾಲಭಂಜಿಕೆ (ಕಥಾ ಸಂಕಲನ)

ಶಾಲಭಂಜಿಕೆ (ಕಥಾ ಸಂಕಲನ)

ಕಥೆ-೧

ಮೊನಾಲಿಸಾಳ ನಗುವನ್ನೂ ಮೀರಿಸುವ ಶಿಲ್ಪಕಲೆಯೊಂದು ಭಾರತದಲ್ಲಿದೆ ಎಂದು ಬಹಳ ಜನರಿಗೆ ತಿಳಿದಿಲ್ಲ. ಅಂತಹ ಶಾಲಭಂಜಿಕೆಯ ಪ್ರತಿಮೆಯ ನಗುವಿಗೆ ಮರುಳಾದ ರಾಜನೊಬ್ಬ ಅದನ್ನು ಕೆತ್ತಿದ ಶಿಲ್ಪಿಯನ್ನು ಹುಡುಕಿ ಹೋಗುತ್ತಾನೆ- ಆ ಶಿಲ್ಪದ ಮೂಲವನ್ನು ಅರಿಯಲೆಂದು. ಆದರೆ ಅದರ ಮೂಲ ತನ್ನೆದೆಯಲ್ಲಿಯೇ ಅಡಗಿ ಕುಳಿತಿದೆ ಎಂಬ ಸತ್ಯ ಅವನನ್ನು ಜಿಗುಪ್ಸೆಗೆ ತಳ್ಳುತ್ತದೆ…

ಕಥೆ-೨

ಜೇನು ನೊಣಗಳ ನೃತ್ಯದ ಬಗ್ಗೆ ಸಂಶೋಧನೆ ಮಾಡುತ್ತಿದ್ದ ಪಾಶ್ಚಾತ್ಯ ವಿಜ್ಞಾನಿಯ ಬಳಿ ಪಿ ಹೆಚ್ ಡಿ ಮಾಡಲೆಂದು ಸೇರಿಕೊಂಡ ಇಬ್ಬರು ಭಾರತದ ವಿಧ್ಯಾರ್ಥಿನಿಯರು ಆ ನೃತ್ಯದ ಅಧ್ಯಯನದಲ್ಲಿ ತೊಡಗಿಸಿಕೊಂಡು, ತಮಗರಿವಿಲ್ಲದೆಯೆ ಅಧ್ಬುತ ಸತ್ಯವೊಂದನ್ನು ಹೊರಗೆಡುಹುತ್ತಾರೆ. ಆ ಅವಿಷ್ಕಾರದ ಫಲಿತಾಂಶವನ್ನು ಅವರಿಗೆ ಅರಿಯದಂತೆಯೇ ಕಬಳಿಸಿದ ವಿಜ್ಞಾನಿ, ಭಾರತದ  ವಿಶಿಷ್ಟ ಸಸ್ಯ ಸಂಪತ್ತನ್ನು ಕದ್ದೊಯ್ಯುವ ಯೋಜನೆಗೆ ಕೈ ಹಾಕುತ್ತಾನೆ. ಆದರೆ ಅಜ್ಞಾತ ಭಾರತೀಯರ ಹೃದಯ ವೈಶಾಲ್ಯತೆಗೆ ಸೋತ ವಿಜ್ಞಾನಿ ತನ್ನ ತಪ್ಪಿಗೆ ತಾನೆ ಪ್ರಾಯಶ್ಚಿತ್ಯ ಮಾಡಿಕೊಳ್ಳುತ್ತಾನೆ.

ಕಥೆ-೩

ಸೋಮನಾಥಪುರದ ವಿಷ್ಣುವಿನ ಎದೆಯಲ್ಲೇಕೆ ಗೋವಿನ ಮುಖ ಅಡಗಿದೆ? ಅದನ್ನು ಕೆತ್ತಿದ ಶಿಲ್ಪಿಯ ಕೈ ಚಳಕವೆ? ಆತ ಯಾವುದೋ ರಹಸ್ಯವನ್ನು ಅಲ್ಲಿ ಬಿಚ್ಚಿಟ್ಟಿದ್ದಾನೆಯೆ?

ಕಥೆ-೪

ಬೆಂಗಳೂರಿನ ಕೆಂಪೇಗೌಡರ ಸೊಸೆ ಕೋಟೆಯ ಬಾಗಿಲಿನ ರಕ್ಷಣೆಗೆ ನಿಜಕ್ಕೂ ತನ್ನ ಜೀವತ್ಯಾಗ ಮಾಡಿದಳೆ?

ಕಥೆ-೫

ಎಲ್ ಟಿ ಟಿ ಯವರು ಭಾರತದ ಸೈನ್ಯದ ಮೇಲಿನ ಸೇಡು ತೀರಿಸಿಕೊಳ್ಳಲೆಂದು ತಮ್ಮ ಹೆಣ್ಣು ಮಕ್ಕಳ ಮಡಿಲಿಗೆ ಏನನ್ನು   ತುಂಬಿದರು? ಅವರ ಪ್ರಯತ್ನ ಫಲಕಾರಿಯಾಯಿತೆ?

ಕಥೆ ೬

ಈಜಿಪ್ತಿನ ಪಿರಮಿಡ್ಡುಗಳ ಗರ್ಭದಲ್ಲಿ ದೊರೆತ ‘ಗರ್ಭ ಪರೀಕ್ಷೆ’ ಹೇಗೆ ಆ ಪ್ರದೇಶದ ಚರಿತ್ರೆಯನ್ನೆ ಬದಲಿಸಿತು?

ಕಥೆ ೭

ಒಂದು ತುಣುಕು ಜಮೀನನ್ನು ಮಾವ ತನ್ನ ಸಂಸಾರದ ಏಳ್ಗೆಗೆ ಕೊಡಲಿಲ್ಲವೆಂಬ ಒಂದೆ ಕಾರಣಕ್ಕೆ ಹಳ್ಳಿಯ ಆ ಯಜಮಾನ ತನ್ನ ಪತ್ನಿಯನ್ನು ತವರು ಮನೆಗೆ ಓಡಿಸುತ್ತಾನೆ. ಕುಲದ ಚರಿತ್ರೆಯ ಒಂದು ರಹಸ್ಯ ಹಿನ್ನೆಲೆಯಿಂದಾಗಿ  ಅಳಿಯನ ಕೋರಿಕೆಯನ್ನು ತೀರಿಸಲಾಗದ ಮಾವ, ಕೊನೆಗೆ ವಿಧಿಯಿಲ್ಲದೆ ಆತನ ಆಸೆಯನ್ನು ನೆರವೇರಿಸಲು ಮುಂದೆ ಬರುತ್ತಾರೆ. ಆಗ ತಿಳಿದ ಚರಿತ್ರೆಯ ಹಿನ್ನೆಲೆಯಲ್ಲಿ ಅಳಿಯನಿಗೆ  ತನ್ನೆಲ್ಲ ಆಸೆ ಅನಿಸಿಕೆಗಳೂ ಕ್ಷುಲ್ಲಕವಾಗಿ ತೋರುತ್ತವೆ.

ಕಥೆ- ೮

ವಿದೇಶಿ ಜೀವಸಂಕುಲವನ್ನು ನಮ್ಮ ದೇಶದೊಳಗೆ  ಬಿಟ್ಟುಕೊಡಬಾರದು ಎನ್ನುವುದು ಒಂದು ವಾದವಾದರೆ, ‘ಬರಲಿ ಬಿಡಿ’ ನಮ್ಮ ಜೀವ ಸಂಪತ್ತು ವೃದ್ದಿಯಾಗುತ್ತದೆ’ ಎನ್ನುವವರೂ ಇದ್ದಾರೆ. ಇವರಲ್ಲಿ ಯಾರು ಸರಿ? ಈ ಚರ್ಚೆ ನಡೆಯುತ್ತಿರುವಾಗಲೆ, ನಮ್ಮ ದೇಶದ ಸಸ್ಯ ಸಂಪತ್ತನ್ನು ನಿರ್ಣಾಮಗೊಳಿಸುವ  ಹುನ್ನಾರಕ್ಕೆ  ಕೈ ಹಾಕಿದ ಒಂದು  ಸಂಘಟನೆಯ ಕಾರ್ಯಾಚರಣೆ, ಒಬ್ಬ ವಿಧ್ಯಾರ್ಥಿನಿಯ ಕೈಚಳಕದಿಂದ ಸೋಲುತ್ತದೆ.

Read More