ಮಿಹಿರಾಕುಲ (ಕಥಾ ಸಂಕಲನ)

ಮಿಹಿರಾಕುಲ (ಕಥಾ ಸಂಕಲನ)

ಮಿಹಿರಾಕುಲ (ಕಥಾ ಸಂಕಲನ)

ಮಿಹಿರಾಕುಲ (ಕಥಾ ಸಂಕಲನ)

ಕಥೆ -೧

ಪ್ರಪಾತದ ಅಂಚಿನಲ್ಲಿ ಸಾಗುವ ಆನೆಯೊಂದು ಕಾಲುಜಾರಿ ಪ್ರಪಾತಕ್ಕೆ ಬೀಳುವಾಗ ಅದರಿಂದ ಹೊರಡುವ   ಆರ್ಥನಾದವನ್ನು ಕೇಳಿ ಸಂತೋಷಪಡುವ ರಾಜ ಎಷ್ಟು ಕ್ರೂರಿಯಾಗಿರಬಹುದು? ಆ ಆರ್ಥನಾದವನ್ನು ಮತ್ತೆ ಮತ್ತೆ ಅನುಬವಿಸಿ ಆನಂದಿಸಲು  ತನ್ನ ಸೈನ್ಯದ ಉಳಿದ ಆನೆಗಳನ್ನೂ ಹಾಗೆಯೇ ಪ್ರಪಾತಕ್ಕೆ ನೂಕಿದನೆಂದರೆ? ಆದರೆ ಆತನ ಜೀವನ ಈ ಕ್ರೂರತೆಗೆ ವೈರುಧ್ಯವಾಗಿದ್ದರೆ? ಚರಿತ್ರೆಯ ವಿವರಗಳು ಎಲ್ಲೋ ಕೈ ತಪ್ಪಿವೆ ಎಂದಲ್ಲವೆ?

ಕಥೆ -೨

ಭಾರತದ  ‘ಗ್ರಾಂಡ್ ಕ್ಯಾನ್ಯಾನ್’ ಎಂದೆ ಹೆಸರುವಾಸಿಯಾಗಿರುವ ಗಂಡೀಕೋಟೆಯಲ್ಲಿ ನಡೆದ, ಚರಿತ್ರೆಯಲ್ಲಿ ಅಡಗಿ ಕುಳಿತಿರುವ ಒಂದು ದುರಂತ ಕಥೆ

ಕಥೆ -೩

ಸಮಾಜದಲ್ಲಿ ಅಸಮಾನತೆಯನ್ನು ನಿರ್ಮೂಲ ಮಾಡಲು ಸಾಧ್ಯವೆ? ಒಂದು ರೀತಿಯ ಅಸಮಾನತೆಯನ್ನು ದಿಕ್ಕರಿಸಿದಾಗ ಮತ್ತೊಂದು ಹೆಡೆ  ಎತ್ತಿ ಬುಸುಗುಟ್ಟುವುದನ್ನು ಚರಿತ್ರೆಯುದ್ದಕ್ಕೂ ಕಾಣಬಹುದು.  ಹಾಗೆಯೆ ಕಲೆ ಮತ್ತು ಸಂಸ್ಕೃತಿಯಲ್ಲಿ  ಬೇರೂರಿರುವ ಅಸಮಾನತೆಗಳೂ ಕೂಡ.

ಈ ವಿಷಯಗಳ ಸುತ್ತ ಹೆಣೆದ ಕತೆಗಳ ಸಂಗ್ರಹ ಮಿಹಿರಾಕುಲ

Read More
ಶಿಲಾಕುಲವಲಸೆ (ಕಾದಂಬರಿ)

aಶಿಲಾಕುಲವಲಸೆ (ಕಾದಂಬರಿ)

ಶಿಲಾಕುಲವಲಸೆ (ಕಾದಂಬರಿ)

ಶಿಲಾಕುಲವಲಸೆ (ಕಾದಂಬರಿ)

ಭಾರತಕ್ಕೆ ಸ್ವಾತಂತ್ರ್ಯ ಬಂದ ಬೆನ್ನಲ್ಲಿ ಬ್ರಿಟಿಷರು  ಸಾಗಿಸಲು ಹೊರಟ ಅಪಾರ ಸಂಪತ್ತಿನ ಅದೆಷ್ಟೋ  ಪೆಟ್ಟಿಗೆಗಳಲ್ಲಿ ಒಂದನ್ನು ಅವರದೆ ಅಧಿಕಾರಿಯೊಬ್ಬ ಚಾಣಾಕ್ಷತೆಯಿಂದ ಲಪಟಾಯಿಸುತ್ತಾನೆ. ಅದರ ಜೊತೆಗೆ ತಾನೂ ಮಾಯವಾಗುತ್ತಾನೆ. ಆ ಪೆಟ್ಟಿಗೆ ಇಂಗ್ಲೆಂಡ್ ತಲುಪದಿದ್ದುದನ್ನು ಅರಿತ ಬ್ರಿಟಿಷ್ ಸಾಮ್ರಾಜ್ಯ ಕಂಗಾಲಾಗುತ್ತದೆ- ಅದರಲ್ಲಿದ್ದ ಆಸ್ತಿಗಾಗಿ ಅಲ್ಲ ಬದಲಿಗೆ ಅಲ್ಲಿದ್ದ ಒಂದು ಡಾಕ್ಯುಮೆಂಟ್ ಬಹಿರಂಗಗೊಂಡರೆ ಇಡೀ ಸಾಮ್ರಾಜ್ಯಕ್ಕೆ ಅವಮಾನ ಎಂದು. ಹಾಗಿದ್ದರೆ ಆ ಪೆಟ್ಟಿಗೆಯಲ್ಲಿ ಏನಿತ್ತು?

ಆರ್ಯರು ಎಂದರೆ ಯಾರು? ಪಾಶ್ಚಾತ್ಯ ಸಂಶೋಧಕರು ಹೇಳಿದ ಹಾಗೆ ಯೂರೋಪಿನ ಕಡೆಯಿಂದ ಬಂದ ದಾಳಿಕೋರರೆ? ಅಥವ ಇಲ್ಲಿಯೆ ನಮ್ಮ ನೆಲದಲ್ಲಿಯೇ ಬೆಳೆದು ನಮ್ಮ ರಕ್ತವನ್ನು ಹಂಚಿಕೊಂಡು ವೇದಗಳನ್ನು ರಚಿಸಿದ ನಮ್ಮದೇ ಜನಾಂಗವೆ?

ದೇವರು ಎಂದರೆ ಯಾರು? ದಶಾವತಾರದ ಮೂಲವೇನು?

ಇಂಥಹ ವಿಷಯಗಳ ಸುತ್ತ ಸುಳಿದಾಡುವ ಪಾತ್ರಗಳ ಮೂಲಕ ಭಾರತವನ್ನು ಒಡೆಯಲು ನಡೆದ ಷಡ್ಯಂತ್ರಗಳನ್ನು ಹೆಕ್ಕಿ ತೆಗೆಯುತ್ತದೆ ಈ ಕಾದಂಬರಿ.

Read More
- ಮೂಕ ಧಾತು (ಕಾದಂಬರಿ)

ಮೂಕ ಧಾತು (ಕಾದಂಬರಿ)

ಮೂಕ ಧಾತು (ಕಾದಂಬರಿ)

ಮೂಕ ಧಾತು (ಕಾದಂಬರಿ)

ಜೀವ ಸಂಕುಲದ ವಿಕಾಸದ ಶಕ್ತಿಯೇ ಸ್ವಾರ್ಥ, ಆ ಸ್ವಾರ್ಥ ಇಲ್ಲದಿದ್ದಲ್ಲಿ ನಮ್ಮ ಅಸ್ಥಿತ್ವವೇ ಇರುತ್ತಿರಲಿಲ್ಲ ಎಂದು ವಿಜ್ಞಾನ ಹೇಳಿದರೆ, ನಾವು ನಿಸ್ವಾರ್ಥದಿಂದ ಬಾಳಬೇಕು ಎಂದು ಧರ್ಮ ಮತ್ತು ಸಂಸ್ಕೃತಿ ಬೋದಿಸುತ್ತದೆ.

ಇವುಗಳಲ್ಲಿ ಯಾವುದು ಸರಿ?

ಮಾನವನಿಗೆ ಆಸೆಗಳೆ ಇಲ್ಲದಿದ್ದಲ್ಲಿ  ನಮ್ಮ ಸಂಸ್ಕೃತಿಯೇ ಬೆಳೆಯುತ್ತಿರಲಿಲ್ಲ, ಯಾವ ಅವಿಷ್ಕಾರಗಳೂ  ಉದ್ಭವವಾಗುತ್ತಿರಲಿಲ್ಲ. ಹಾಗಾಗಿ ಮಾನವನ  ನಾಗರಿಕತೆಯನ್ನು ಮುನ್ನಡೆಸುತ್ತಿರುವುದೆ ಆಸೆ ಎಂದು ಕೆಲವರು ವಾದಿಸಿದರೆ, ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ದ ಎಚ್ಚರಿಸಿದ.

ಇವುಗಳಲ್ಲಿ ಯಾವುದು ಸತ್ಯ?

ಜಗತ್ತನ್ನು ಮತ್ತು ಅಲ್ಲಿನ ಜೀವವನ್ನು  ಸೃಷ್ಟಿಸಿದ್ದೆ ದೇವರು ಎನ್ನುವುದು ಧಾರ್ಮಿಕ ನಂಬಿಕೆಯಾದರೆ, ವಿಕಾಸದ ಉನ್ನತಿಯನ್ನು ತಲುಪಿದ  ಮಾನವನೆ ಬ್ರಹ್ಮಾಂಡದಾಧ್ಯಂತ ಎಲ್ಲೆಲ್ಲೂ ಜೀವವನ್ನು  ಬಿತ್ತುತ್ತಿರಲು ಸಾಧ್ಯ. ಹಾಗಾಗಿ ವಿಕಾಸದ ತುಟ್ಟ ತುದಿ ತಲುಪಿದ ಮಾನವನೆ ನಾವು ನಂಬಿರುವ ‘ದೈವ’  ಎಂದು ಕೆಲವು ಚಿಂತಕರು ವಾದಿಸುತ್ತಾರೆ.

ಹಾಗಾದರೆ ದೇವರು ಎಂದರೆ ಯಾರು?

ಈ ಪ್ರಶ್ನೆಗಳ ಬೆನ್ನಟ್ಟಿ ಹೋಗುವ ಪ್ರಯತ್ನ ಈ ಕಾದಂಬರಿಯ ಪಾತ್ರಗಳಲ್ಲಿ ಕಾಣಬಹುದು.

ಎರಡನೆ ಬುದ್ದ ಎಂದೆ ಖ್ಯಾತಿಯಾಗಿರುವ ನಾಗಾರ್ಜುನ ಆಸೆಗಳನ್ನು ಹತ್ತಿಕ್ಕುವ ತಂತ್ರಗಾರಿಕೆಯನ್ನು ಸಿದ್ದಿಸಿಕೊಂಡಿದ್ದ. ಆ ತಂತ್ರದ ವಿವರಗಳು ಇತ್ತೀಚೆಗೆ   ಚೀನಾದ ಆಡಳಿತದ ಕೈ ಸೇರಿ, ಅದರ ಕೆಲವೇ ಮಂದಿ ಇಡೀ ಪ್ರಪಂಚವನ್ನು ತಮ್ಮ ಅಧೀನಕ್ಕೆ ತಂದುಕೊಳ್ಳುವ ಯೋಜನೆಯೊಂದನ್ನು ರೂಪಿಸುತ್ತಾರೆ. ಆ ಯೋಜನೆಯ ರಹಸ್ಯವನ್ನು ಬೇದಿಸುವ ಕೆಲವು ವಿಜ್ಞಾನಿಗಳ ಮತ್ತು ಚಿಂತಕರ ನಡುವೆ ನಡೆಯುವ ಸಂಕೀರ್‍ಣ ಚರ್ಚೆಗಳು ಮತ್ತು ಆ ಯೋಜನೆಯನ್ನು ನಿಷ್ಕ್ರಿಯೆಗೊಳಿಸಲು ಅವರು ಕೈಗೊಳ್ಳುವ ಪ್ರಯತ್ನ ಈ ಕಥೆಯ ವಸ್ತು.

Read More
ಸಿಗೀರಿಯ (ಕಥಾಸಂಕಲನ)

ಸಿಗೀರಿಯ (ಕಥಾಸಂಕಲನ)

ಸಿಗೀರಿಯ (ಕಥಾಸಂಕಲನ)

ಸಿಗೀರಿಯ (ಕಥಾಸಂಕಲನ)

ಕಥೆ-೧

ಶ್ರೀಲಂಕದ ಸಿಗೀರಿಯ ಎಂಬ ಬೆಟ್ಟದ ತುಟ್ಟ ತುದಿಯಲ್ಲಿ ನಿರ್ಮಿಸಿದ ಅರಮನೆಯನ್ನು  ಕಶ್ಯಪ ರಾಜನು  ತನ್ನ ಸ್ವರ್ಗ ಎಂದೇ ಪರಿಗಣಿಸಿದ್ದ. ಆದರೆ ಇಂದು ಆ ಅರಮನೆಯ ಪಳೆಯುಳಿಕೆಗಳು ಆ ಸ್ವರ್ಗದಲ್ಲಿ ಕಶ್ಯಪ ತನ್ನ ಕತ್ತನ್ನು ತಾನೇ ಕತ್ತರಿಸಿಕೊಂಡ ದುರಂತ ಕತೆ ಹೇಳುತ್ತವೆ…

ಕಥೆ-೨

ಬ್ರಿಟಿಷ್ ಅಧಿಕಾರಿಯೊಬ್ಬ ತನ್ನ ವಂಶಕ್ಕೆ ಒದಗಿದ   ದುರಂತಕ್ಕೆ ಸೇಡು ತೀರಿಸಿಕೊಳ್ಳಲೆಂದು ಭಾರತಕ್ಕೆ ಬರುತ್ತಾನೆ. ಕೋಲಾರದ ಬಳಿಯ ಹಳ್ಳಿಯಲ್ಲಿ ಇಳಿವಯಸ್ಸಿನ ರೈತನ ಬಳಿ ದೊರಕಿದ ಬಂಗಾರದ ಇಟ್ಟಿಗೆಯ ತುಣುಕೊಂದು ಆತನಿಗೆ  ಆ ಅವಕಾಶ ಒದಗಿಸುತ್ತದೆ ಕೂಡ. ಆದರೆ ಅದರ ಮೂಲವನ್ನು ಹುಡುಕಿಹೊರಟ ಆ ಅಧಿಕಾರಿಗೆ ದೊರಕಿದ ವಿವರಗಳಿಂದ ತನ್ನ ಹುಟ್ಟು ಕೂಡ ಆ ಬಂಗಾರದ ಗಟ್ಟಿಯ ಜೊತೆ ಹೆಣೆದುಕೊಂಡಿದೆ ಎಂಬ   ಸತ್ಯ ತಿಳಿದಾಗ ತನ್ನ ವಂಶದ ರಹಸ್ಯವನ್ನು ತಾನೇ  ಬಚ್ಚಿಡಲು ಪ್ರಯತ್ನಿಸುತ್ತಾನೆ.

ಕಥೆ-೩

ತನ್ನ ಪ್ರಾಣವನ್ನಾದರೂ ತೇಯ್ದು ಮಗುವನ್ನು ಕಾಪಾಡುವ ಮಮಕಾರ ಪ್ರತಿ ತಾಯಿಗೆ. ಆದರೆ ಆ ಮಮಕಾರ ಮಾಯವಾದರೆ… ಮಾನವ ಕುಲ ಎಂತಹ ದುರಂತಕ್ಕೆ ಪ್ರವೇಶಿಸಬಹುದು ಎಂಬ ಸಂಶೋಧನೆ ಎದೆ ನಡುಗಿಸುತ್ತದೆ.

Read More
ಏಳು ರೊಟ್ಟಿಗಳು (ಕಾದಂಬರಿ)

ಏಳು ರೊಟ್ಟಿಗಳು (ಕಾದಂಬರಿ)

ಏಳು ರೊಟ್ಟಿಗಳು (ಕಾದಂಬರಿ)

ಏಳು ರೊಟ್ಟಿಗಳು (ಕಾದಂಬರಿ)

ಹೈದರಾಬಾದಿನ ನಿಜಾಮ ಸ್ವಾತಂತ್ರ್ಯಾನಂತರ ಭಾರತದೊಂದಿಗೆ ವಿಲೀನಗೊಳ್ಳಲಿಚ್ಚಿಸದೆ ಲೋಡುಗಟ್ಟಲೆ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ಆಸ್ತಿಯೊಂದಿಗೆ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಭಾರತ ಸರ್ಕಾರದ ಬಿಗಿ ನಿಯಂತ್ರಣದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಹಾಗಾದರೆ ನಿಜಾಮ ಒಯ್ಯಲೆತ್ನಿಸಿದ ಅಪಾರನಿಧಿ ಏನಾಯಿತು?  ಇದರ ಹುಡುಕಾಟವೆ ‘ಏಳು ರೊಟ್ಟಿಗಳ’ ಕೇಂದ್ರ ವಸ್ತು.

Read More
ಚಿತಾದಂತ (ಕಾದಂಬರಿ)

ಚಿತಾದಂತ (ಕಾದಂಬರಿ)

ಚಿತಾದಂತ (ಕಾದಂಬರಿ)

ಚಿತಾದಂತ (ಕಾದಂಬರಿ)

ಕ್ರಿಸ್ತ ಪೂರ್ವ ೫೦೦ ರಿಂದ ಇಂದಿನವರೆಗೆ ಹರಡಿಕೊಂಡಿರುವ ಈ ಕಥಾನಕದ  ಕೇಂದ್ರ ವಸ್ತುಗಳೆಂದರೆ  ಅಲೆಗ್ಸಾಂಡರ್ ಭಾರತದಲ್ಲಿ ಬಚ್ಚಿಟ್ಟ ನಿಧಿ ಹಾಗೂ ಆ ನಿಧಿಯ ರಹಸ್ಯದೊಂದಿಗೆ ಬೆರೆತುಕೊಂಡಿರುವ ಬೌದ್ದ ಧರ್ಮ, ಅಶ್ವಘೋಷ, ಅಶೋಕನ ಜೀವನ,  ಬೌದ್ದ   ಧರ್ಮದ ರಕ್ಷಣೆಗಾಗಿ ನಿಂತ ತೇರವಾದಿಗಳು, ಅವರ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳು…

ಅಲೆಕ್ಸಾಂಡರ ನ ನಿಧಿಯ  ರಕ್ಷಣೆಗೆ ಅಶೋಕ, ಉಪಯೋಗಿಸಿದ ತಂತ್ರಗಳಲ್ಲಿ ಮೆಸೆಡೋನಿಯನ್ ಸಾಮ್ರಾಜ್ಯದ ಲಾಂಛನವಾದ ಸಿಡಿವ ನಕ್ಷತ್ರ ಹೇಗೆ ಹೆಣೆದುಕೊಂಡಿದೆ? ಕೊನೆಗೆ ಆ ಲಾಂಛನ  ಭಾರತದ ರಾಷ್ಟ್ರಧ್ವಜದಲ್ಲಿ  ಚಕ್ರವಾಗಿ  ಸೇರಿದ ರಹಸ್ಯ…

ಇವೆಲ್ಲವನ್ನೂ ಹೆಣೆಯುವ ಕಥಾನಕ ಚಿತಾದಂತ

Read More
ಕಲ್ದವಸಿ (ಕಥಾ ಸಂಕಲನ)

ಕಲ್ದವಸಿ (ಕಥಾ ಸಂಕಲನ)

ಕಲ್ದವಸಿ (ಕಥಾ ಸಂಕಲನ)

ಕಲ್ದವಸಿ (ಕಥಾ ಸಂಕಲನ)

ಕಥೆ-೧

ಕೃಷ್ಣಾ ನದಿಯ ಕಣಿವೆಯಲ್ಲಿ ಕ್ರಿ. ಪೂ. ೩ನೆ ಶತಮಾನದಿಂದ ಪ್ರಾರಂಭವಾದ ಶಾತವಾಹನರ ರಾಜರು ಬಹುಪಾಲು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದರು. ಆದರೆ ಅವರ ಬಹುತೇಕ ರಾಣಿಯರೇಕೆ ಜೈನ ಧರ್ಮವನ್ನು ಅಪ್ಪಿಕೊಂಡಿದ್ದರು? ಇನ್ನು ಈ ಶಾಲಿವಾಹನರ ರಾಜಕುಮಾರರೇಕೆ ತಮ್ಮ ತಂದೆಯ ಹೆಸರನ್ನು ಬಿಟ್ಟು ತಾಯಿಯ ಹೆಸರನ್ನು ಪಡೆಯುತ್ತಿದ್ದರು?

ಕಥೆ -೨

ನಶಿಸಿಹೋಗುತ್ತಿರುವ ಭಾಷೆಗಳನ್ನು, ಜೀವ ವೈವಿದ್ಯತೆಯನ್ನು, ಚರಿತ್ರೆಯ ಸ್ತಾವರಗಳನ್ನು ಹಾಗೂ ಸಂಸ್ಕೃತಿ ಮುಂತಾದುವನ್ನು ಗುರುತಿಸಿ ಅವುಗಳ ಸಂರಕ್ಷಣೆಗೆ ಮುಂದಾಗುವ ನಮ್ಮ ಆಡಳಿತ ವ್ಯವಸ್ಥೆ ಯಾವುದೇ  ಧರ್ಮವು ನಶಿಸಿಹೋಗುತ್ತಿದ್ದರೆ ಅದನ್ನೂ ಅಷ್ಟೆ ಆಸ್ತೆಯಿಂದ ಕಾಪಾಡಬೇಕಲ್ಲವೆ? ವಿಚಿತ್ರವೆಂದರೆ ನಮ್ಮ ವ್ಯವಸ್ಥೆ ಅಂಥಹ ಕರ್ತವ್ಯವನ್ನು ಹೆಗಲಿಗೇರಿಸುವ ಬದಲು, ನಶಿಸಿಹೋಗುವ ಧರ್ಮದ ರಕ್ಷಣೆಗೆಂದು ಎದ್ದು ನಿಂತವರತ್ತ ಕೆಂಗಣ್ಣು ಬೀರುತ್ತದೆ. ಈ ಅಸಮಾನ ದೃಷ್ಟಿಗೆ ನಮ್ಮ ಸಂವಿದಾನವನ್ನು ಮುಂದಿಕ್ಕುವ ವಾದವನ್ನು ಈ ಕತೆ ಪ್ರಶ್ನಿಸುತ್ತದೆ.

ಕಥೆ -೩

ಕುವೆಂಪು ಅವರು ತಮ್ಮ ರಾಮಾಯಣವನ್ನು ರಚಿಸುವಾಗ ಊರ್ಮಿಳೆಯ ಪಾತ್ರಕ್ಕೇಕೆ ಅಷ್ಟೊಂದು ಮಿಡಿದಿದ್ದರು? ಊರ್ಮಿಳೆಯಂತದೇ  ಜೀವನ ಸಾಗಿಸುತ್ತಿದ್ದ ಒಬ್ಬ ಸರಳ ಹೆಣ್ಣಿನ ವಾದದಿಂದ ಅವರು ಪ್ರಭಾವಿತಗೊಂಡಿದ್ದರೆ?

ಇವು ಇಲ್ಲಿನ ಕತೆಗಳ ವಸ್ತು.

Read More
  • 1
  • 2