ದಿವ್ಯ ಸುಳಿ (ಸಸ್ಯ ಸಗ್ಗ - 2)

ದಿವ್ಯ ಸುಳಿ (ಸಸ್ಯ ಸಗ್ಗ – 2)

ದಿವ್ಯ ಸುಳಿ (ಸಸ್ಯ ಸಗ್ಗ - 2)

  ದಿವ್ಯ ಸುಳಿ (ಸಸ್ಯ ಸಗ್ಗ – 2)

ಇಡೀ ವಿಶ್ವ, ಬ್ರಹ್ಮಾಂಡವೆ ಆಗಲಿ, ಅದರಲ್ಲಿನ ಜೀವ ಪ್ರಪಂಚವೆ ಆಗಲಿ, ಹಾಗೂ ಆ ಜೀವ ಪ್ರಪಂಚದ ಪ್ರಜ್ಞಾ ವರ್ತನೆಗಳೆ ಆಗಲಿ, ಎಲ್ಲವೂ ಒಂದಾನೊಂದು ರೀತಿಯಲ್ಲಿ ಯಾವುದೋ ಸುಳಿಗೆ ಸಿಕ್ಕಿ ವಿಕಾಸಗೊಂಡ ಪ್ರಾಕಾರಗಳು. ಹಾಗೆಯೇ,   ವಿಜ್ಞಾನ,  ಕಲೆ, ಸಾಹಿತ್ಯ, ಧರ್ಮ, ಇವೆಲ್ಲವೂ ಮಾನವನ ಪ್ರಜ್ಞೆಯ ಕೂಸುಗಳೇ ಆದರೂ, ಅವು          ಆ ಪ್ರಜ್ಞೆಯನ್ನೇ ತಮ್ಮ ಸಂಕೋಲೆಗಳಲ್ಲಿ ಕಟ್ಟಿ ಹಾಕಬಲ್ಲ ಶಕ್ತಿ ಸುಳಿಗಳು ಎಂಬ ಕಟು ಸತ್ಯವನ್ನು ಲೇಖಕರು ಇಲ್ಲಿ ಪರಿಚಯಿಸುತ್ತಾರೆ. ಜೀವ ಪ್ರಪಂಚದ ಹಲವಾರು ಆಯಾಮಗಳನ್ನು ಅರಿಯಲು ವೈಜ್ಞಾನಿಕ  ಅಧ್ಯಯನದಲ್ಲಿ ನಿರತರಾಗಿದ್ದ ಲೇಖಕರು, ಕ್ರಮೇಣ ವಿಜ್ಞಾನದ ಹಾದಿಯಲ್ಲಿಯೇ ಹಲವು ಧಾರ್ಮಿಕ  ವಸ್ತು-ವಿಷಯಗಳನ್ನೂ ಅವಲೋಕಿಸಲು ಮುಂದಾದಾಗ ಕಂಡುಕೊಂಡ  ‘ದಿವ್ಯ ಸುಳಿ’ ಗಳ   ಪರಿಚಯವನ್ನು, ಆ  ಪಯಣದ ಹೆಜ್ಜೆಗಳನ್ನೂ   ಈ ಹೊತ್ತಿಗೆ  ತೆರೆದಿಡುತ್ತದೆ. ಅವರೆ ಹೇಳುವ ಹಾಗೆ ‘ಈ ಹೊತ್ತಿಗೆಯಲ್ಲಿ .. ಪುರಾವೆಗಳನ್ನಾಧರಿಸಿದ ವೈಜ್ಞಾನಿಕ ವಿಷಯಗಳಿಂದ …. ಕೇವಲ ತರ್ಕಗಳನ್ನೇ ಆಧರಿಸುವ ‘ಶೋಧ’ಗಳ ವರೆಗೆ ವೈವಿಧ್ಯಮಯ  ವಸ್ತುಗಳ ನಡುವೆ  ಪ್ರಯಾಣವಿದೆ.’  ವಿಜ್ಞಾನ, ಚರಿತ್ರೆ, ಹಾಗೂ ಪೌರಾಣಿಕ ವಿಷಯಗಳ ಸುತ್ತ ಕಥೆ ಕಾದಂಬರಿ ಹೆಣೆಯುವ  ಡಾ. ಕೆ ಎನ್ ಗಣೇಶಯ್ಯ, ‘ದಿವ್ಯ ಸುಳಿ’ ಯಲ್ಲಿ ಅವೆಲ್ಲ ವಿಶಯಗಳ ಅಂತರಾಳದ ಸಂಬಂಧವನ್ನು ಕೆದಕಿ ತೆಗೆಯಲು ಪ್ರಯತ್ನಿಸಿದ್ದಾರೆ.

Read More
ಸಸ್ಯ ಸಗ್ಗ

ಸಸ್ಯ ಸಗ್ಗ

ಸಸ್ಯ ಸಗ್ಗ

ಸಸ್ಯ ಸಗ್ಗ

ಸಸ್ಯ ಜಗತ್ತಿನಲ್ಲಿಯೂ ಪ್ರೀತಿ ಪ್ರೇಮ, ದ್ವೇಶ,  ಹಿಂಸೆ, ಕೊಲೆ, ಸ್ವಾರ್ಥ, ಮುಂತಾದ ವರ್ತನೆಗಳು ಸಾರಾಸಗಟಾಗಿ ವಿಕಾಸಗೊಂಡಿವೆ ಎನ್ನುವುದನ್ನು ಲೇಖಕರು ತಮ್ಮದೆ ಸಂಶೋಧನೆಗಳ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ

Read More
ಆರ್ಯ ವೀರ್ಯ (ಕಥಾ ಸಂಕಲನ)

ಆರ್ಯ ವೀರ್ಯ (ಕಥಾ ಸಂಕಲನ)

ಆರ್ಯ ವೀರ್ಯ (ಕಥಾ ಸಂಕಲನ)

ಆರ್ಯ ವೀರ್ಯ (ಕಥಾ ಸಂಕಲನ)

ಕಥೆ-೧

ಕಾಶ್ಮೀರದ ಕಣಿವೆಯೊಂದರಲ್ಲಿ ಇನ್ನೂ ಆರ್ಯರ ಕುಲವೊಂದು ಅಸ್ತಿತ್ವದಲ್ಲಿದೆ ಎಂದು ನಂಬಿದ ಜರ್ಮನಿಯ ಹಿಟ್ಲರ್ ನ ಕಡೆಯ ಗುಂಪೊಂದು ಒಂದು ರಹಸ್ಯ

ಯೋಜನೆಯನ್ನು ಕೈಗೆತ್ತಿಕೊಳ್ಳುತ್ತದೆ – ಇಲ್ಲಿನ ಆರ್ಯ- ರಕ್ತವನ್ನು ಗುಟ್ಟಾಗಿ ಜರ್ಮನಿಗೆ ಹೊತ್ತೊಯ್ಯಲೆಂದು. ಅವರ ಪ್ರಯತ್ನ ಸಫಲವಾಯಿತೆ?

ಕಥೆ- ೨

ಯಾವುದೇ ಪ್ರಭಾವಾಕಾರಿ ಚಿಂತಕ ಒಂದು ಇಡೀ ಜನಾಂಗವನ್ನೆ ತನ್ನ ಚಿಂತನೆಯ ಬೋಗುಣಿಯೊಳಗೆ ಸೆಳೆಯುತ್ತಾನೆ. ಆ ಜನಾಂಗ ಆತನ ಚಿಂತನೆಯ ದಾಸರಾಗಿ ಬದುಕುತ್ತಾರೆ. ದಶಕಗಳ ನಂತರ  ಆತನ ಚಿಂತನಾ ಲಹರಿಯ ಹುಳುಕುಗಳು ಹೊರಬರುತ್ತಿದ್ದಂತೆ, ಇಡೀ ಸಮಾಜಕ್ಕೆ ತಮ್ಮ ತಪ್ಪಿನ ಅರಿವಾಗತೊಡಗುತ್ತದೆ.

ಇವು ಈ ಕಥಾಸಂಕಲನದ ಬಿಂದುಗಳು

Read More
- ರಕ್ತಸಿಕ್ತ ರತ್ನ(ಕಾದಂಬರಿ)

ರಕ್ತಸಿಕ್ತ ರತ್ನ(ಕಾದಂಬರಿ)

- ರಕ್ತಸಿಕ್ತ ರತ್ನ(ಕಾದಂಬರಿ)

ರಕ್ತಸಿಕ್ತ ರತ್ನ(ಕಾದಂಬರಿ)

ಬರ್ಮಾ ದೇಶದ ರಾಜ, ತೀಬಾ, ಭಾರತದ ಪಶ್ಚಿಮ ಕರಾವಳಿಯ ಸಮುದ್ರ ತೀರದಲ್ಲಿರುವ   ರತ್ನಗಿರಿಯಲ್ಲಿ ಕಟ್ಟಿಸಿದ ಅರಮನೆಯಲ್ಲಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಬಾಳಿನ ಕೊನೆಯ  ದಿನಗಳನ್ನು ಕಳೆಯುತ್ತಾನೆ- ಬ್ರಿಟಿಷ್ ಸರ್ಕಾರದ ಬಂಧಿಯಾಗಿ.  ಮೂಲತಃ ಬೌದ್ದ ಬಿಕ್ಕುವಾಗಿದ್ದ ಆ ರಾಜನು ಬರ್ಮದಿಂದ ತನ್ನೊಂದಿಗೆ ಹೊತ್ತು ತಂದಿದ್ದ ಪ್ರಪಂಚ ಪ್ರಸಿದ್ದ ರತ್ನವೊಂದನ್ನು ಬ್ರಿಟಿಷ್ ಅಧಿಕಾರಿಗಳು ‘ಮಾಯ’ವಾಗಿಸುತ್ತಾರೆ. ತೀಬಾ ರಾಜನನ್ನು   ರತ್ನಗಿರಿಗೆ ಎಳೆತಂದ ಬ್ರಿಟಿಷ್ ಅಧಿಕಾರ ಇಂದಿಗೂ  ಆ ರತ್ನದ ವಿವರಗಳನ್ನು ರಹಸ್ಯವಾಗಿಯೇ ಕಾಪಾಡಿಕೊಂಡು ಬಂದಿದೆ.

ಈ ಮಧ್ಯೆ, ತನ್ನ ಕುಟುಂಬದ ರಹಸ್ಯವೊಂದನ್ನು ಹುಡುಕಿ ಬರ್ಮಗೆ ಹೊರಟ ಲಂಡನ್ನಿನ ಒಬ್ಬ ಪತ್ರಕರ್ತೆ, ಭಾರತಕ್ಕೆ ಬಂದಾಗ  ಅಚಾನಕ್ ಆಗಿ ಕೊಲೆಯಾಗುತ್ತಾಳೆ. ಆ ಕೊಲೆಯ ಹಿಂದಿನ ರಹಸ್ಯವನ್ನು ಬೇದಿಸಿ  ಹೊರಟ ಭಾರತದ ತಂಡಕ್ಕೆ ತೀಬಾ ರಾಜನ ರತ್ನದ ರಹಸ್ಯ, ಆತನ ಅರಮನೆಯಲ್ಲಿ ನಡೆದ ರಾಜಕೀಯ ಷಡ್ಯಂತ್ರಗಳು,  ಮತ್ತು ಲಂಡನ್ನಿನ ಪತ್ರಕರ್ತೆಯ ಕುಟುಂಬದ ರಹಸ್ಯ, ಈ ಎಲ್ಲವುಗಳ ನಡುವಿನ ಕಗ್ಗಂಟು ಬಿಚ್ಚಿಕೊಳ್ಳತೊಡಗುತ್ತದೆ.  ಬರ್ಮ ದೇಶದ ಬೌದ್ದ ಧರ್ಮ, ಬ್ರಿಟಿಷ್ ಆಡಳಿತದ ಕ್ರೂರ ಮುಖ ಹಾಗೂ, ರಾಜನ ಪತ್ನಿ ಸುಪಾಯಲಾತ್ ಳ ವಿಚಿತ್ರ ಬದುಕಿನ ಸುತ್ತ ಬೆಳೆಯುವ ಕತೆ ‘ರಕ್ತಸಿಕ್ತರತ್ನ’

Read More
ವಿ-ಚಾರಣ

ವಿ-ಚಾರಣ

ವಿ-ಚಾರಣ

ವಿ-ಚಾರಣ

ಸಂತೋಷವಾದಾಗ ನಾವೇಕೆ ನಗಬೇಕು? ಅಳಬಾರದೇಕೆ?

ಸೀತಾಸ್ವಯಂವರ ಇದ್ದಹಾಗೆ ರಾಮಾಸ್ವಯಂವಧು ಏಕಿಲ್ಲ?

ಊಟ ಮಾಡಲು ಭಾರತದವರು ಬಹುತೇಕ ಕೈಗಳನ್ನು ಬಳಸಿದರೆ, ಪಾಶ್ಚಾತ್ಯರೇಕೆ ಆಯುಧಗಳನ್ನು ಉಪಯೋಗಿಸುತ್ತಾರೆ?

ಮಾನವನಲ್ಲಿ ವಿಕಾಸಗೊಂಡಿರುವ ಇಂತಹ  ವೈಯುಕ್ತಿಕ ಹಾಗೂ ಸಾಮಾಜಿಕ ವರ್ತನೆಗಳ ಔಚಿತ್ಯವನ್ನು ವಿವರಿಸುವ ಲೇಖನಗಳು ಈ ಸಂಗ್ರಹದಲ್ಲಿವೆ.

Read More
ಬಳ್ಳಿಕಾಳಬೆಳ್ಳಿ (ಕಾದಂಬರಿ)

ಬಳ್ಳಿಕಾಳಬೆಳ್ಳಿ (ಕಾದಂಬರಿ)

ಬಳ್ಳಿಕಾಳಬೆಳ್ಳಿ (ಕಾದಂಬರಿ)

ಬಳ್ಳಿಕಾಳಬೆಳ್ಳಿ (ಕಾದಂಬರಿ)

ಎರಡನೆ ಮಹಾಯುದ್ದದಲ್ಲಿ ಭಾರತದಿಂದ ಹೊರಟ  ಗೇರುಸೊಪ್ಪ ಎಂಬ ಹಡುಗು, ಜರ್ಮನಿಯ ನೌಕಾದಾಳಿಗೆ ಸಿಕ್ಕಿ ಮುಳುಗಿ ಹೋಗುತ್ತದೆ. ಹಲವಾರು ದಶಕಗಳ ನಂತರ ಅದನ್ನು ಹುಡುಕಿ ತೆಗೆದ ಸಂಸ್ತೆಯೊಂದು ಅದರೊಳಗಿನ ಬೆಳ್ಳಿಯನ್ನು ಕೋಟಿ ಕೋಟಿ ಡಾಲರ್ ಗಳಿಗೆ ಮಾರಾಟ ಮಾಡುತ್ತದೆ. ಈ ಬೆಳ್ಳಿಯನ್ನು ಭಾರತದ ಯಾವ ಬಾಗದಿಂದ ರವಾನಿಸಲಾಗಿತ್ತು? ಆ ಹಡಗಿಗೆ   ಗೇರುಸೊಪ್ಪ  ಎಂದು ಹೆಸರಿಡಲು ಕಾರಣ?

ಕರ್ನಾಟಕದ ಕರಾವಳಿಯ ಇತಿಹಾಸದಲ್ಲಿ ಕಾಣೆಯಾಗಿರುವ ಪುಟಗಳತ್ತ ಕೈತೋರುವ ಈ ಕಾದಂಬರಿ, ಜೈನ ಧರ್ಮದ ವೀರ ರಾಣಿ ಚೆನ್ನಬೈರಾದೇವಿಯ ಜೀವನವನ್ನು ಚಿತ್ರಿಸುತ್ತದೆ. ಐವತ್ತು ವರ್ಷಗಳ ಕಾಲದ ದೀರ್ಘ ಆಡಳಿತ ನಡೆಸಿದ ಆಕೆ ಪಾಶ್ಚಾತ್ಯರನ್ನು ಭಾರತದಿಂದ ಹೊರಗಿಡಲು ನಡೆಸಿದ ಹೋರಾಟಗಳ ಬಗ್ಗೆ ವಿವರಗಳನ್ನು ನೀಡುತ್ತದೆ.

Read More
ಪೆರಿನಿತಾಂಡವ (ಕಥಾ ಸಂಕಲನ)

ಪೆರಿನಿತಾಂಡವ (ಕಥಾ ಸಂಕಲನ)

ಪೆರಿನಿತಾಂಡವ (ಕಥಾ ಸಂಕಲನ)

ಪೆರಿನಿತಾಂಡವ (ಕಥಾ ಸಂಕಲನ)

ಕಥೆ -೧

ಕಳೆದ ಕೆಲವು ದಶಕಗಳಿಂದ ಏಶ್ಯ ಖಂಡದ ಹಲವು ದೇಶಗಳಲ್ಲಿ ಹೆಣ್ಣಿನ ಬ್ರೂಣ ಹತ್ಯೆ ನಿರಂತರವಾಗಿ ನಡೆದಿರುವ ಕಾರಣ ಹೆಣ್ಣಿನ ಅಭಾವ ಸೃಷ್ಟಿಯಾಗಿ, ಈ ಪ್ರದೇಶಗಳಲ್ಲಿ ಸಾಮಾಜಿಕ ಅಶಾಂತಿ ತಲೆದೋರುತ್ತದೆ ಎಂದು ವಿಜ್ಞಾನಿಗಳು ಬವಿಷ್ಯ ನುಡಿದಿದ್ದಾರೆ!

ಕಥೆ -೨

ಪ್ರೀ ತಿ ಪ್ರೇಮ ಯಾವುದೆ ವಯಸ್ಸಿಗೆ ಮಾತ್ರವೆ ಸೀಮಿತವಲ್ಲ. ಅದು ಸಿಗದಿದ್ದಾಗ ವಯಸ್ಸಾದ  ವ್ಯಕ್ತಿಗಳ ಮನಸ್ಸಿನಲ್ಲಾಗುವ ತಲ್ಲಣವು ಅವರ ಸಂಸಾರವನ್ನೆ ಅಲುಗಾಡಿಸಬಹುದು.

 ಕಥೆ -೩

ವಾರಂಗಲ್ ಬಳಿಯ ಪಾಲಂ ಪೇಟೆಯಲ್ಲಿನ ಅತೀ ಸುಂದರವಾದ ದೇವಾಲಯವನ್ನು ನಮ್ಮ ಬೇಲೂರು ಹಳೇಬೀಡಿನ ಶೈಲಿಯಲ್ಲಿಯೇ ನಿರ್ಮಿಸಲು ಕಾರಣ? ಆ ದೇವಾಲಯವನ್ನೇಕೆ ಅದರ ಶಿಲ್ಪಿ ರಾಮಪ್ಪನ ಹೆಸರಿನಿಂದಲೆ ಗುರುತಿಸಲಾಗಿದೆ?

Read More
  • 1
  • 2