ಭಾರತಕ್ಕೆ ಸ್ವಾತಂತ್ರ್ಯ ಬಂದ ಬೆನ್ನಲ್ಲಿ ಬ್ರಿಟಿಷರು ಸಾಗಿಸಲು ಹೊರಟ ಅಪಾರ ಸಂಪತ್ತಿನ ಅದೆಷ್ಟೋ ಪೆಟ್ಟಿಗೆಗಳಲ್ಲಿ ಒಂದನ್ನು ಅವರದೆ ಅಧಿಕಾರಿಯೊಬ್ಬ ಚಾಣಾಕ್ಷತೆಯಿಂದ ಲಪಟಾಯಿಸುತ್ತಾನೆ. ಅದರ ಜೊತೆಗೆ ತಾನೂ ಮಾಯವಾಗುತ್ತಾನೆ. ಆ ಪೆಟ್ಟಿಗೆ ಇಂಗ್ಲೆಂಡ್ ತಲುಪದಿದ್ದುದನ್ನು ಅರಿತ ಬ್ರಿಟಿಷ್ ಸಾಮ್ರಾಜ್ಯ ಕಂಗಾಲಾಗುತ್ತದೆ- ಅದರಲ್ಲಿದ್ದ ಆಸ್ತಿಗಾಗಿ ಅಲ್ಲ ಬದಲಿಗೆ ಅಲ್ಲಿದ್ದ ಒಂದು ಡಾಕ್ಯುಮೆಂಟ್ ಬಹಿರಂಗಗೊಂಡರೆ ಇಡೀ ಸಾಮ್ರಾಜ್ಯಕ್ಕೆ ಅವಮಾನ ಎಂದು. ಹಾಗಿದ್ದರೆ ಆ ಪೆಟ್ಟಿಗೆಯಲ್ಲಿ ಏನಿತ್ತು?
ಆರ್ಯರು ಎಂದರೆ ಯಾರು? ಪಾಶ್ಚಾತ್ಯ ಸಂಶೋಧಕರು ಹೇಳಿದ ಹಾಗೆ ಯೂರೋಪಿನ ಕಡೆಯಿಂದ ಬಂದ ದಾಳಿಕೋರರೆ? ಅಥವ ಇಲ್ಲಿಯೆ ನಮ್ಮ ನೆಲದಲ್ಲಿಯೇ ಬೆಳೆದು ನಮ್ಮ ರಕ್ತವನ್ನು ಹಂಚಿಕೊಂಡು ವೇದಗಳನ್ನು ರಚಿಸಿದ ನಮ್ಮದೇ ಜನಾಂಗವೆ?
ದೇವರು ಎಂದರೆ ಯಾರು? ದಶಾವತಾರದ ಮೂಲವೇನು?
ಇಂಥಹ ವಿಷಯಗಳ ಸುತ್ತ ಸುಳಿದಾಡುವ ಪಾತ್ರಗಳ ಮೂಲಕ ಭಾರತವನ್ನು ಒಡೆಯಲು ನಡೆದ ಷಡ್ಯಂತ್ರಗಳನ್ನು ಹೆಕ್ಕಿ ತೆಗೆಯುತ್ತದೆ ಈ ಕಾದಂಬರಿ.