ಶಾಲಭಂಜಿಕೆ (ಕಥಾ ಸಂಕಲನ)

ಶಾಲಭಂಜಿಕೆ (ಕಥಾ ಸಂಕಲನ)

ಕಥೆ-೧

ಮೊನಾಲಿಸಾಳ ನಗುವನ್ನೂ ಮೀರಿಸುವ ಶಿಲ್ಪಕಲೆಯೊಂದು ಭಾರತದಲ್ಲಿದೆ ಎಂದು ಬಹಳ ಜನರಿಗೆ ತಿಳಿದಿಲ್ಲ. ಅಂತಹ ಶಾಲಭಂಜಿಕೆಯ ಪ್ರತಿಮೆಯ ನಗುವಿಗೆ ಮರುಳಾದ ರಾಜನೊಬ್ಬ ಅದನ್ನು ಕೆತ್ತಿದ ಶಿಲ್ಪಿಯನ್ನು ಹುಡುಕಿ ಹೋಗುತ್ತಾನೆ- ಆ ಶಿಲ್ಪದ ಮೂಲವನ್ನು ಅರಿಯಲೆಂದು. ಆದರೆ ಅದರ ಮೂಲ ತನ್ನೆದೆಯಲ್ಲಿಯೇ ಅಡಗಿ ಕುಳಿತಿದೆ ಎಂಬ ಸತ್ಯ ಅವನನ್ನು ಜಿಗುಪ್ಸೆಗೆ ತಳ್ಳುತ್ತದೆ…

ಕಥೆ-೨

ಜೇನು ನೊಣಗಳ ನೃತ್ಯದ ಬಗ್ಗೆ ಸಂಶೋಧನೆ ಮಾಡುತ್ತಿದ್ದ ಪಾಶ್ಚಾತ್ಯ ವಿಜ್ಞಾನಿಯ ಬಳಿ ಪಿ ಹೆಚ್ ಡಿ ಮಾಡಲೆಂದು ಸೇರಿಕೊಂಡ ಇಬ್ಬರು ಭಾರತದ ವಿಧ್ಯಾರ್ಥಿನಿಯರು ಆ ನೃತ್ಯದ ಅಧ್ಯಯನದಲ್ಲಿ ತೊಡಗಿಸಿಕೊಂಡು, ತಮಗರಿವಿಲ್ಲದೆಯೆ ಅಧ್ಬುತ ಸತ್ಯವೊಂದನ್ನು ಹೊರಗೆಡುಹುತ್ತಾರೆ. ಆ ಅವಿಷ್ಕಾರದ ಫಲಿತಾಂಶವನ್ನು ಅವರಿಗೆ ಅರಿಯದಂತೆಯೇ ಕಬಳಿಸಿದ ವಿಜ್ಞಾನಿ, ಭಾರತದ  ವಿಶಿಷ್ಟ ಸಸ್ಯ ಸಂಪತ್ತನ್ನು ಕದ್ದೊಯ್ಯುವ ಯೋಜನೆಗೆ ಕೈ ಹಾಕುತ್ತಾನೆ. ಆದರೆ ಅಜ್ಞಾತ ಭಾರತೀಯರ ಹೃದಯ ವೈಶಾಲ್ಯತೆಗೆ ಸೋತ ವಿಜ್ಞಾನಿ ತನ್ನ ತಪ್ಪಿಗೆ ತಾನೆ ಪ್ರಾಯಶ್ಚಿತ್ಯ ಮಾಡಿಕೊಳ್ಳುತ್ತಾನೆ.

ಕಥೆ-೩

ಸೋಮನಾಥಪುರದ ವಿಷ್ಣುವಿನ ಎದೆಯಲ್ಲೇಕೆ ಗೋವಿನ ಮುಖ ಅಡಗಿದೆ? ಅದನ್ನು ಕೆತ್ತಿದ ಶಿಲ್ಪಿಯ ಕೈ ಚಳಕವೆ? ಆತ ಯಾವುದೋ ರಹಸ್ಯವನ್ನು ಅಲ್ಲಿ ಬಿಚ್ಚಿಟ್ಟಿದ್ದಾನೆಯೆ?

ಕಥೆ-೪

ಬೆಂಗಳೂರಿನ ಕೆಂಪೇಗೌಡರ ಸೊಸೆ ಕೋಟೆಯ ಬಾಗಿಲಿನ ರಕ್ಷಣೆಗೆ ನಿಜಕ್ಕೂ ತನ್ನ ಜೀವತ್ಯಾಗ ಮಾಡಿದಳೆ?

ಕಥೆ-೫

ಎಲ್ ಟಿ ಟಿ ಯವರು ಭಾರತದ ಸೈನ್ಯದ ಮೇಲಿನ ಸೇಡು ತೀರಿಸಿಕೊಳ್ಳಲೆಂದು ತಮ್ಮ ಹೆಣ್ಣು ಮಕ್ಕಳ ಮಡಿಲಿಗೆ ಏನನ್ನು   ತುಂಬಿದರು? ಅವರ ಪ್ರಯತ್ನ ಫಲಕಾರಿಯಾಯಿತೆ?

ಕಥೆ ೬

ಈಜಿಪ್ತಿನ ಪಿರಮಿಡ್ಡುಗಳ ಗರ್ಭದಲ್ಲಿ ದೊರೆತ ‘ಗರ್ಭ ಪರೀಕ್ಷೆ’ ಹೇಗೆ ಆ ಪ್ರದೇಶದ ಚರಿತ್ರೆಯನ್ನೆ ಬದಲಿಸಿತು?

ಕಥೆ ೭

ಒಂದು ತುಣುಕು ಜಮೀನನ್ನು ಮಾವ ತನ್ನ ಸಂಸಾರದ ಏಳ್ಗೆಗೆ ಕೊಡಲಿಲ್ಲವೆಂಬ ಒಂದೆ ಕಾರಣಕ್ಕೆ ಹಳ್ಳಿಯ ಆ ಯಜಮಾನ ತನ್ನ ಪತ್ನಿಯನ್ನು ತವರು ಮನೆಗೆ ಓಡಿಸುತ್ತಾನೆ. ಕುಲದ ಚರಿತ್ರೆಯ ಒಂದು ರಹಸ್ಯ ಹಿನ್ನೆಲೆಯಿಂದಾಗಿ  ಅಳಿಯನ ಕೋರಿಕೆಯನ್ನು ತೀರಿಸಲಾಗದ ಮಾವ, ಕೊನೆಗೆ ವಿಧಿಯಿಲ್ಲದೆ ಆತನ ಆಸೆಯನ್ನು ನೆರವೇರಿಸಲು ಮುಂದೆ ಬರುತ್ತಾರೆ. ಆಗ ತಿಳಿದ ಚರಿತ್ರೆಯ ಹಿನ್ನೆಲೆಯಲ್ಲಿ ಅಳಿಯನಿಗೆ  ತನ್ನೆಲ್ಲ ಆಸೆ ಅನಿಸಿಕೆಗಳೂ ಕ್ಷುಲ್ಲಕವಾಗಿ ತೋರುತ್ತವೆ.

ಕಥೆ- ೮

ವಿದೇಶಿ ಜೀವಸಂಕುಲವನ್ನು ನಮ್ಮ ದೇಶದೊಳಗೆ  ಬಿಟ್ಟುಕೊಡಬಾರದು ಎನ್ನುವುದು ಒಂದು ವಾದವಾದರೆ, ‘ಬರಲಿ ಬಿಡಿ’ ನಮ್ಮ ಜೀವ ಸಂಪತ್ತು ವೃದ್ದಿಯಾಗುತ್ತದೆ’ ಎನ್ನುವವರೂ ಇದ್ದಾರೆ. ಇವರಲ್ಲಿ ಯಾರು ಸರಿ? ಈ ಚರ್ಚೆ ನಡೆಯುತ್ತಿರುವಾಗಲೆ, ನಮ್ಮ ದೇಶದ ಸಸ್ಯ ಸಂಪತ್ತನ್ನು ನಿರ್ಣಾಮಗೊಳಿಸುವ  ಹುನ್ನಾರಕ್ಕೆ  ಕೈ ಹಾಕಿದ ಒಂದು  ಸಂಘಟನೆಯ ಕಾರ್ಯಾಚರಣೆ, ಒಬ್ಬ ವಿಧ್ಯಾರ್ಥಿನಿಯ ಕೈಚಳಕದಿಂದ ಸೋಲುತ್ತದೆ.