ಬರ್ಮಾ ದೇಶದ ರಾಜ, ತೀಬಾ, ಭಾರತದ ಪಶ್ಚಿಮ ಕರಾವಳಿಯ ಸಮುದ್ರ ತೀರದಲ್ಲಿರುವ ರತ್ನಗಿರಿಯಲ್ಲಿ ಕಟ್ಟಿಸಿದ ಅರಮನೆಯಲ್ಲಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಬಾಳಿನ ಕೊನೆಯ ದಿನಗಳನ್ನು ಕಳೆಯುತ್ತಾನೆ- ಬ್ರಿಟಿಷ್ ಸರ್ಕಾರದ ಬಂಧಿಯಾಗಿ. ಮೂಲತಃ ಬೌದ್ದ ಬಿಕ್ಕುವಾಗಿದ್ದ ಆ ರಾಜನು ಬರ್ಮದಿಂದ ತನ್ನೊಂದಿಗೆ ಹೊತ್ತು ತಂದಿದ್ದ ಪ್ರಪಂಚ ಪ್ರಸಿದ್ದ ರತ್ನವೊಂದನ್ನು ಬ್ರಿಟಿಷ್ ಅಧಿಕಾರಿಗಳು ‘ಮಾಯ’ವಾಗಿಸುತ್ತಾರೆ. ತೀಬಾ ರಾಜನನ್ನು ರತ್ನಗಿರಿಗೆ ಎಳೆತಂದ ಬ್ರಿಟಿಷ್ ಅಧಿಕಾರ ಇಂದಿಗೂ ಆ ರತ್ನದ ವಿವರಗಳನ್ನು ರಹಸ್ಯವಾಗಿಯೇ ಕಾಪಾಡಿಕೊಂಡು ಬಂದಿದೆ.
ಈ ಮಧ್ಯೆ, ತನ್ನ ಕುಟುಂಬದ ರಹಸ್ಯವೊಂದನ್ನು ಹುಡುಕಿ ಬರ್ಮಗೆ ಹೊರಟ ಲಂಡನ್ನಿನ ಒಬ್ಬ ಪತ್ರಕರ್ತೆ, ಭಾರತಕ್ಕೆ ಬಂದಾಗ ಅಚಾನಕ್ ಆಗಿ ಕೊಲೆಯಾಗುತ್ತಾಳೆ. ಆ ಕೊಲೆಯ ಹಿಂದಿನ ರಹಸ್ಯವನ್ನು ಬೇದಿಸಿ ಹೊರಟ ಭಾರತದ ತಂಡಕ್ಕೆ ತೀಬಾ ರಾಜನ ರತ್ನದ ರಹಸ್ಯ, ಆತನ ಅರಮನೆಯಲ್ಲಿ ನಡೆದ ರಾಜಕೀಯ ಷಡ್ಯಂತ್ರಗಳು, ಮತ್ತು ಲಂಡನ್ನಿನ ಪತ್ರಕರ್ತೆಯ ಕುಟುಂಬದ ರಹಸ್ಯ, ಈ ಎಲ್ಲವುಗಳ ನಡುವಿನ ಕಗ್ಗಂಟು ಬಿಚ್ಚಿಕೊಳ್ಳತೊಡಗುತ್ತದೆ. ಬರ್ಮ ದೇಶದ ಬೌದ್ದ ಧರ್ಮ, ಬ್ರಿಟಿಷ್ ಆಡಳಿತದ ಕ್ರೂರ ಮುಖ ಹಾಗೂ, ರಾಜನ ಪತ್ನಿ ಸುಪಾಯಲಾತ್ ಳ ವಿಚಿತ್ರ ಬದುಕಿನ ಸುತ್ತ ಬೆಳೆಯುವ ಕತೆ ‘ರಕ್ತಸಿಕ್ತರತ್ನ’