ಎರಡನೆ ಮಹಾಯುದ್ದದಲ್ಲಿ ಭಾರತದಿಂದ ಹೊರಟ ಗೇರುಸೊಪ್ಪ ಎಂಬ ಹಡುಗು, ಜರ್ಮನಿಯ ನೌಕಾದಾಳಿಗೆ ಸಿಕ್ಕಿ ಮುಳುಗಿ ಹೋಗುತ್ತದೆ. ಹಲವಾರು ದಶಕಗಳ ನಂತರ ಅದನ್ನು ಹುಡುಕಿ ತೆಗೆದ ಸಂಸ್ತೆಯೊಂದು ಅದರೊಳಗಿನ ಬೆಳ್ಳಿಯನ್ನು ಕೋಟಿ ಕೋಟಿ ಡಾಲರ್ ಗಳಿಗೆ ಮಾರಾಟ ಮಾಡುತ್ತದೆ. ಈ ಬೆಳ್ಳಿಯನ್ನು ಭಾರತದ ಯಾವ ಬಾಗದಿಂದ ರವಾನಿಸಲಾಗಿತ್ತು? ಆ ಹಡಗಿಗೆ ಗೇರುಸೊಪ್ಪ ಎಂದು ಹೆಸರಿಡಲು ಕಾರಣ?
ಕರ್ನಾಟಕದ ಕರಾವಳಿಯ ಇತಿಹಾಸದಲ್ಲಿ ಕಾಣೆಯಾಗಿರುವ ಪುಟಗಳತ್ತ ಕೈತೋರುವ ಈ ಕಾದಂಬರಿ, ಜೈನ ಧರ್ಮದ ವೀರ ರಾಣಿ ಚೆನ್ನಬೈರಾದೇವಿಯ ಜೀವನವನ್ನು ಚಿತ್ರಿಸುತ್ತದೆ. ಐವತ್ತು ವರ್ಷಗಳ ಕಾಲದ ದೀರ್ಘ ಆಡಳಿತ ನಡೆಸಿದ ಆಕೆ ಪಾಶ್ಚಾತ್ಯರನ್ನು ಭಾರತದಿಂದ ಹೊರಗಿಡಲು ನಡೆಸಿದ ಹೋರಾಟಗಳ ಬಗ್ಗೆ ವಿವರಗಳನ್ನು ನೀಡುತ್ತದೆ.