- ತಿರುಪತಿಗೆ ಕೇವಲ ೩೦ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ?
- ಮೆಹರ್ ಗಂಜ್ ನ ‘ಬಲ್ಗಾಡಿಯ ಅರಮನೆ’ಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ?
- ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್ ಗೆ ಮುಸ್ಲಿಮ್ ರಾಜಕುಮಾರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ ಎನ್ನಲಾದ ಮುಸೋಲಿಯಮ್ ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೆ? ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು?
- ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾಧ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ದದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ?
ಇಂಥಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹ ‘ಗುಡಿ ಮಲ್ಲಮ್’.