ಕಥೆ-೧
ಶ್ರೀಲಂಕದ ಸಿಗೀರಿಯ ಎಂಬ ಬೆಟ್ಟದ ತುಟ್ಟ ತುದಿಯಲ್ಲಿ ನಿರ್ಮಿಸಿದ ಅರಮನೆಯನ್ನು ಕಶ್ಯಪ ರಾಜನು ತನ್ನ ಸ್ವರ್ಗ ಎಂದೇ ಪರಿಗಣಿಸಿದ್ದ. ಆದರೆ ಇಂದು ಆ ಅರಮನೆಯ ಪಳೆಯುಳಿಕೆಗಳು ಆ ಸ್ವರ್ಗದಲ್ಲಿ ಕಶ್ಯಪ ತನ್ನ ಕತ್ತನ್ನು ತಾನೇ ಕತ್ತರಿಸಿಕೊಂಡ ದುರಂತ ಕತೆ ಹೇಳುತ್ತವೆ…
ಕಥೆ-೨
ಬ್ರಿಟಿಷ್ ಅಧಿಕಾರಿಯೊಬ್ಬ ತನ್ನ ವಂಶಕ್ಕೆ ಒದಗಿದ ದುರಂತಕ್ಕೆ ಸೇಡು ತೀರಿಸಿಕೊಳ್ಳಲೆಂದು ಭಾರತಕ್ಕೆ ಬರುತ್ತಾನೆ. ಕೋಲಾರದ ಬಳಿಯ ಹಳ್ಳಿಯಲ್ಲಿ ಇಳಿವಯಸ್ಸಿನ ರೈತನ ಬಳಿ ದೊರಕಿದ ಬಂಗಾರದ ಇಟ್ಟಿಗೆಯ ತುಣುಕೊಂದು ಆತನಿಗೆ ಆ ಅವಕಾಶ ಒದಗಿಸುತ್ತದೆ ಕೂಡ. ಆದರೆ ಅದರ ಮೂಲವನ್ನು ಹುಡುಕಿಹೊರಟ ಆ ಅಧಿಕಾರಿಗೆ ದೊರಕಿದ ವಿವರಗಳಿಂದ ತನ್ನ ಹುಟ್ಟು ಕೂಡ ಆ ಬಂಗಾರದ ಗಟ್ಟಿಯ ಜೊತೆ ಹೆಣೆದುಕೊಂಡಿದೆ ಎಂಬ ಸತ್ಯ ತಿಳಿದಾಗ ತನ್ನ ವಂಶದ ರಹಸ್ಯವನ್ನು ತಾನೇ ಬಚ್ಚಿಡಲು ಪ್ರಯತ್ನಿಸುತ್ತಾನೆ.
ಕಥೆ-೩
ತನ್ನ ಪ್ರಾಣವನ್ನಾದರೂ ತೇಯ್ದು ಮಗುವನ್ನು ಕಾಪಾಡುವ ಮಮಕಾರ ಪ್ರತಿ ತಾಯಿಗೆ. ಆದರೆ ಆ ಮಮಕಾರ ಮಾಯವಾದರೆ… ಮಾನವ ಕುಲ ಎಂತಹ ದುರಂತಕ್ಕೆ ಪ್ರವೇಶಿಸಬಹುದು ಎಂಬ ಸಂಶೋಧನೆ ಎದೆ ನಡುಗಿಸುತ್ತದೆ.