Book No - 1

ಕರಿಸಿರಿಯಾನ (ಕಾದಂಬರಿ)

ಪ್ರಪಂಚದ ಇತಿಹಾಸದಲ್ಲಿಯೇ ಅತ್ಯಂತ ಸಿರಿವಂತ  ಸಾಮ್ರಾಜ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ವಿಜಯ ನಗರದ ರಾಜದಾನಿ ಹಂಪಿಯನ್ನು  ರೋಮ ನಂತರದ ಅತ್ಯಂತ ಸಿರಿವಂತ ನಗರ ಎಂದು ಚರಿತ್ರಕಾರರು ಬಣ್ಣಿಸಿದ್ದಾರೆ.  ಈ ಸಿರಿವಂತ ಸಾಮ್ರಾಜ್ಯದ ಅರಸರ ನಿಧಿಯು  ತಾಳಿಕೋಟೆಯ ಯುದ್ದದ ನಂತರ ಬಹುಮನಿ ಸುಲ್ತಾನರ ಕೈವಶವಾಯಿತು ಎಂದು ನಂಬಲಾಗಿತ್ತು. ಆದರೆ ಚರಿತ್ರೆಯ ಕೆಲವು ಆಕರಗಳ ಪ್ರಕಾರ ಸುಲ್ತಾನರು ಹಂಪಿಯನ್ನು ತಲುಪುವಷ್ಟರಲ್ಲಿಯೇ ಆ ಇಡೀ ನಿಧಿಯನ್ನು ರಾಜವಂಶದವರು ರಹಸ್ಯವಾಗಿ ಸುರಕ್ಷಿತ ತಾಣಕ್ಕೆ ಹೊತ್ತೊಯ್ದ್ ಸಂರಕ್ಶಿಸುತ್ತಾರೆ. ಈ ಘಟನೆಗಳ ನಂತರ ವಿಜಯನಗರದ ವಂಶವು ಎಂದೂ ಅದ್ದೂರಿಯಾಗಿ ತಲೆ ಎತ್ತಲಿಲ್ಲ. ಹಾಗಾದರೆ ಅವರು ಸಂರಕ್ಷಿಸಿದ  ನಿಧಿಯು ಇನ್ನೂ ರಹಸ್ಯ ತಾಣದಲ್ಲಿ ಅಡಗಿದೆಯೆ? ಈ ರಹಸ್ಯವನ್ನು ಹುಡುಕಿ ಹೊರಟ ಇಬ್ಬರು ಸಂಶೋಧಕಿಯರ ಯಾತ್ರೆಯೆ ಕರಿಸಿರಿಯಾನ.